![](https://shoonya.foundation/wp-content/uploads/2023/12/bf26e860-sl-shape-layer.png)
![](https://shoonya.foundation/wp-content/uploads/2024/08/Screenshot-2024-08-04-132324-min.png)
ನನ್ನದೊಂದು ದ್ವಂದ್ವ
ಈ ಸಣ್ಣ ಕವಿತೆಗಳು, ನನ್ನ ಆಧ್ಯಾತ್ಮಿಕ ಅನ್ವೇಷಣೆಯ, ಹೆಜ್ಜೆ ಗುರುತುಗಳು. ಇಲ್ಲಿರುವ ಎಲ್ಲವನ್ನೂ ಅರ್ಥೈಸಲು ಓದುಗರಿಗೆ ಸಾಧ್ಯವಾಗದೇ ಇರಬಹುದು. ಆದರೆ ಅದಕ್ಕೆ ತಕ್ಕ ಅನುಭವವಿದ್ದರೆ, ಅದರ ಭಾವಕ್ಕೆ ತಲುಪಬಹುದು. ಇಲ್ಲವಾದರೆ ಸಾಮೂಹಿಕ/ ಸಾಮಾಜಿಕ ಬದುಕೇ, ನಿಜವಾದ ಜೀವನವೆಂಬ ಭ್ರಮಾಲೋಕದಲ್ಲಿ ವಿಹರಿಸಬಹುದು. ನಿಮ್ಮಲ್ಲಿನ ಸ್ಥಿತಿಯು ಜಾಗರೂಕತೆಗೆ ಬಂದರೆ, ನನ್ನ ಅನುಭವದ ಸಾಲುಗಳನ್ನು ಅರಿಯಬಹುದು. ಕೇವಲ ಸಾಹಿತ್ಯ ದೃಷ್ಟಿಕೋನದಿಂದ ನೋಡಿದರೆ, ಬರಿ ಪದಗಳ ಆಟವಾಗಬಹುದು ವಿನಹ, ನೈಜ್ಯತೆಗೆ ಹತ್ತಿರವಿರುವುದಿಲ್ಲ. ಕಾವ್ಯವು ಬಹಳ ಸರಳ ರೂಪದಲ್ಲಿದ್ದು, ಅಧ್ಯಾತ್ಮವನ್ನು ಜೀವನದ ವ್ಯವಸ್ಥೆಯಿಂದ ಬಹು ದೂರದಿಂದ ನೋಡುವ ಮನಸ್ಥಿತಿ ನಮ್ಮೊಳಗೆ ಸೃಷ್ಟಿಯಾಗಿ ಬಿಟ್ಟಿದೆ. ಆಧ್ಯಾತ್ಮ ಅನುಭವದ ಶಿಕ್ಷಣದ ಕೊರತೆಯನ್ನು ನೀಗಿಸಲು, ನನ್ನ ಈ ಸಾಹಿತ್ಯವಿಲ್ಲದ ಅನುಭವಗಳು ನಿಮ್ಮ ಅರ್ಥದೊಳಗೆ ಬೆಸೆದರೆ ಸಾಕು ಅದು ನನ್ನ ಈ ಕವನಗಳನ್ನು ಸಾಕ್ಷಾತ್ಕಾರಗೊಳಿಸುತ್ತವೆ.